ಕಿರಣ್ ಮೂವಿ ಮೇಕರ್ಸ್ ಲಾಂಛನದಲ್ಲಿ ದೇವರಾಜ್ ಪಾಂಡೆ, ಸಿ.ಆರ್.ಶ್ರೀನಿವಾಸ್ ಹಾಗೂ ಶ್ರೀಕಾಂತ್ ಹೆಚ್.ಆರ್ ಅವರು ನಿರ್ಮಿಸಿರುವ ‘ಛಿ|o ಫ಼ುಟ್ಪಾತ್ ೨‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕಿಶನ್.ಎಸ್.ಎಸ್ ನಿರ್ದೇಶನದ ಈ ಚಿತ್ರಕ್ಕೆ ವಿವೇಕ್, ಕಿಶನ್ ಎಸ್.ಎಸ್ ಹಾಗೂ ಮನೋಜ್ ಶ್ರೀಹರಿ ಸಂಗೀತ ನೀಡಿದ್ದಾರೆ. ಮಕೇಶ್ ಕೆ ದೇವ್ ಹಾಗೂ ಎಸ್.ಕೆ.ರಾವ್ ಛಾಯಾಗ್ರಹಣ, ಕಿಶನ್.ಎಸ್.ಎಸ್. ಸಂಕಲನವಿರುವ ಈ ಚಿತ್ರಕ್ಕೆ ಶ್ಯಾಮ್ಪ್ರಸಾದ್ ಹಾಗೂ ಶ್ರೀಕಾಂತ್ ಹೆಚ್.ಆರ್ ಸಂಭಾಷಣೆ ಬರೆದಿದ್ದಾರೆ. ಕಿಶನ್.ಎಸ್.ಎಸ್, ದೀಪ್ ಪಾಠಕ್, ಡಿಂಗ್ರಿ ನರೇಶ್, ಜಯಕಾರ್ತಿಕ್, ಇಶಾ ಡಿಯೋಲ್, ಅನೀಶ್ ಬಾಜ್ಮಿ, ಶ್ರವಂತಿ ಸಾಯಿನಾಥ್, ಕರಿ ಸುಬ್ಬು, ಶಿವರಾಮ್, ಮಾ|| ಹಿರಣ್ಣಯ್ಯ, ಅಮ್ಜದ್ ಖುರೇಶಿ, ಹನುಮಂತೇಗೌಡ, ಮನೋಜ್ಜಸ್ವಾಲ್, ಪದ್ಮಾ ವಾಸಂತಿ, ಯತಿರಾಜ್, ಶಫೀಕ್ ಸಯ್ಯಿದ್, ಧರ್ಮೇಂದ್ರಅರಸ್, ವಿದ್ಯಾ ವೆಂಕಟ್ರಾಮ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.